Assignment10

Sharanagouda sawarad                                                      ಪ್ರತಿಯೊಂದು ಮಗುವಿಗೆ ಮನೆಯೇ ಮೊದಲ ಪಾಠ ಶಾಲೆ ತಾಯಿಯೇ ಮೊದಲ ಗುರು ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಪೋಷಕರು ತಮ್ಮ ಉತ್ತಮ ಶಿಕ್ಷಣದ ಜೊತೆಗೆ ಸರಿ ಹಾಗೂ ತಪ್ಪಿನ ಬಗ್ಗೆ ಕಲಿಸಿಕೊಡುತ್ತಾರೆ ಹಾಗಾಗಿ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಪೋಷಕರ ಪಾತ್ರ ಹಾಗೂ ಶಿಕ್ಷಕರ ಪಾತ್ರ ಮಹತ್ತರವಾದುದು.
         ಮಕ್ಕಳು ಮನೆಯಲ್ಲಿ ನಿರಂತರವಾಗಿ ಪೋಷಕರನ್ನು ನೋಡಿ ಹೆಚ್ಚು ಅನುಕರಣೆ ಮಾಡುತ್ತಾರೆ. ಮಕ್ಕಳ ಮನಸ್ಸಿನಲ್ಲಿ ಕಲಿಕೆಯ ಪೂರಕ ವಾತಾವರಣ ಕಲ್ಪಿಸುವುದರ ಜೊತೆಗೆ ಮಗುವಿನ ಕಲಿಕೆಯ ಬಗ್ಗೆ ಪೋಷಕರು ಪ್ರೇರೇಪಿಸ ಬೇಕಾಗುತ್ತದೆ.
        ಕೋವಿಡ್ -19 ತೀವ್ರವಾಗಿ ಹಬ್ಬುತ್ತಿರುವ ತುರ್ತು ಸಂದರ್ಭದಲ್ಲಿ ಮಗು ಕಲಿಯಲು ಪೋಷಕರು ಹಾಗೂ ಶಿಕ್ಷಕರು ತಂತ್ರಗಳನ್ನು ಗಳನ್ನು ಉಪಯೋಗಿಸುವುದರಿಂದ ಕಲಿಕೆಯಲ್ಲಿ ಉತ್ಕೃಷ್ಟ ಗಳಿಸಬಹುದಾಗಿದೆ.

ಸಲಹೆ ಸೂಚನೆಗಳು .......💐💐💐💐💐💐💐

1.ಕೋವಿಡ್ -19 ರೋಗ ಸದ್ಯದ ಪರಿಸ್ಥಿತಿಯಲ್ಲಿ ನಿಯಂತ್ರಣಕ್ಕೆ ಬರುವ ಯಾವುದೇ ಸೂಚನೆಗಳು ಕಂಡು ಬಂದಿಲ್ಲ. WHO ವರದಿ ಪ್ರಕಾರ ರೋಗ ನಿಯಂತ್ರಣ ಕಷ್ಟ ಸಾಧ್ಯವಾಗಿದೆ.

2.ಕೋವಿಡ್ -19 ನಿಯಂತ್ರಣಕ್ಕೆ ಬರುವ ತನಕ ಮನೆಯಲ್ಲೇ ಇದ್ದು ಆರೋಗ್ಯ ಕಾಪಾಡಿಕೊಳ್ಳಿ.

3.ಪ್ರತಿನಿತ್ಯ ಆರೋಗ್ಯ ವೃದ್ಧಿಸುವ ಆಹಾರ ಪದ್ಧತಿ ಅನುಸರಿಸಿ.

4.ವಿಟಮಿನ್ -C,  ವಿಟಮಿನ್ -D ಗೆ ಸಂಬಂದಿಸಿದ ಆಹಾರ ಸೇವನೆ ಮಾಡಿ.
 
5.ಪ್ರತಿನಿತ್ಯ ಬಿಸಿ ನೀರನ್ನೇ ಕುಡಿಯಬೇಕು.
 
6.ಪ್ರತಿನಿತ್ಯ ಉಸಿರಾಟಕ್ಕೆ ಸಂಬಂದಿಸಿದ ಪ್ರ್ರಾಣಾಯಾಮ ಹಾಗೂ ಯೋಗಾಸನ ಮಾಡುವುದು ಉತ್ತಮ.
 
7.ಅಗತ್ಯ ಇದ್ದಲ್ಲಿ ಮಾತ್ರ ಮನೆಯಿಂದ ಹೊರ ಹೋಗಿ, ಹಾಗೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು.
 
8.10 ವರ್ಷಕ್ಕಿಂತ ಕಡಿಮೆ ಹಾಗೂ 55 ವರ್ಷ ವಯಸ್ಸಾದ ಹಿರಿಯರ ಆರೋಗ್ಯದ ಕಡೆ ಗಮನ ಇರಲಿ.

9.ಜ್ವರ, ಕೆಮ್ಮು, ನೆಗಡಿ ಯಾವುದೇ ತರ ರೋಗ ಲಕ್ಷಣಗಳು ಕಂಡು ಬಂದಲ್ಲಿ ನೇರವಾಗಿ ವೈದ್ಯರನ್ನು ಬೇಟಿ ಮಾಡಿ.
 
10.ದೇಶದ ರಕ್ಷಣೆ ನಮ್ಮೆಲ್ಲರ ಹೊಣೆ, ದೇಶದ ಪ್ರತಿ ಪ್ರಜೆಯ ಆರೋಗ್ಯ ರಕ್ಷಣೆ ನಮ್ಮೆಲ್ಲರ ಹೊಣೆ.ಹಾಗಾಗಿ ನಿಮ್ಮ ಜೀವವ ನ್ನು ಉಳಿಸಿಕೊಂಡು ಇತರರ ಜೀವವನ್ನು ಕಾಪಾಡಿ. 

 ಕಾರ್ಯ ತಂತ್ರಗಳು.....💐💐💐💐💐💐💐💐

1.ಪೋಷಕರು ವಿದ್ಯಾರ್ಥಿಗಳಿಗೆ ಅಥವಾ ತಮ್ಮ ಮಕ್ಕಳಿಗೆ        ಕಲಿಕೆಗೆ ಪೂರಕವಾದ ವಾತಾವರಣ ಕಲ್ಪಿಸಿಕೊಡುವುದು.

2. ಮಗುವಿಗೆ ಆಸಕ್ತಿ ಇರುವ ಪಠ್ಯೇತರ ಚಟುವಟಿಕೆಗಳ            ಆಯ್ಕೆಗೆ ಅವಕಾಶ ಮಾಡಿಕೊಡುವುದು.

3.ದೂರವಾಣಿ ಮೂಲಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ          ಸಂವಹನಕ್ಕೆ ಅವಕಾಶ ಮಾಡಿ ಕೊಡುವುದು.
 
4.ಮಗುವಿನ ಆಸಕ್ತಿ ವಿಷಯದ ಕಡೆ ಹೆಚ್ಚು ಗಮನ                   ಹರಿಸಲು ಪ್ರೇರೇಪಿಸುವುದು.

5.ಮಗು -ಕಲಿಯುವ -ಕಲಿಕಾ ಶೈಲಿಗೆ ಆದ್ಯತೆ ಕೊಡುವುದು.
 
6.ಮಗುವಿನ ಕಲಿಕೆ ಬಗ್ಗೆ ಪೋಷಕರು ಹಾಗೂ ಶಿಕ್ಷಕರು            ಇಂಟರೆಸ್ಟ್ ತೋರುವುದು.

7.ಮಗುವಿನ ಸಾಮರ್ಥ್ಯದ ಬಗ್ಗೆ ತಿಳಿದುಕೊಂಡು            ..      ಕಲಿಯಲು ಪ್ರೋತ್ಸಾಹಿಸುವುದು.

8.ನೆರೆ -ಹೊರೆ -ವಿದ್ಯಾರ್ಥಿಗಳು ಅಥವ                                ಸಹಪಾರಿಗಳೊಂದಿಗೆ ಬೆರೆತು ಅಂತರ ಕಾಯ್ದುಕೊಂಡು         ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಮಾರ್ಗದರ್ಶನ                 ನೀಡುವುದು.
 
9.ಸರ್ಕಾರದ ಆದೇಶದಂತೆ ತೆರೆಯಲಾಗಿರುವ ವಠಾರ             ಶಾಲೆಗಳ ಸದುಪಯೋಗ ಪಡೆದುಕೊಳ್ಳಲು                       ತಿಳಿಸುವುದು.

10.ಶೈಕ್ಷಣಿಕ ವರ್ಷದ ಪಠ್ಯಗಳನ್ನು ಅಭ್ಯಾಸ ಮಾಡಲು             ತಮ್ಮ ನೆರೆಹೊರೆಯ ವಿದ್ಯಾರ್ಥಿಗಳ ಪುಸ್ತಕಗಳನ್ನು              ಸಂಗ್ರಹಣೆ ಮಾಡಿ ಅಭ್ಯಾಸ ಮಾಡುವುದು.